ಒಂದು ರಾಷ್ಟ್ರ – ಒಂದು ಪಡಿತರ ಚೀಟಿ ಯೋಜನೆಗೆ ಹೊಸ ರೂಪ: ಡಿಜಿಟಲ್ ರೇಷನ್ ಕಾರ್ಡ್
ನವದೆಹಲಿ: ದೇಶದ ಕೋಟ್ಯಾಂತರ ಬಡಜನರಿಗೆ ಆಧಾರವಾಗಿರುವ ಪಡಿತರ ವ್ಯವಸ್ಥೆ ಇದೀಗ ತಂತ್ರಜ್ಞಾನ ಸ್ಪರ್ಶ ಪಡೆದಿದೆ. ಆಹಾರ ಭದ್ರತಾ ಕಾಯ್ದೆ (NFSA) ಅಡಿಯಲ್ಲಿ ಪಡಿತರ ವಿತರಣೆ ಹೆಚ್ಚು ಪಾರದರ್ಶಕ ಮತ್ತು ಸುಲಭವಾಗಲು ಕೇಂದ್ರ ಸರ್ಕಾರ ಡಿಜಿಟಲ್ ರೇಷನ್ ಕಾರ್ಡ್ ಪರಿಕಲ್ಪನೆಯನ್ನು ಪರಿಚಯಿಸಿದೆ.
ಇಂದಿನ ಡಿಜಿಟಲ್ ಯುಗದಲ್ಲಿ ಬ್ಯಾಂಕ್ ವ್ಯವಹಾರದಿಂದ ಹಿಡಿದು, ಬಿಲ್ ಪಾವತಿವರೆಗೆ ಎಲ್ಲವೂ ಆನ್‌ಲೈನ್‌ನಲ್ಲಿ ನಡೆಯುತ್ತಿದೆ. ಇದೇ ಕ್ರಮದಲ್ಲಿ, ಈಗ ಪಡಿತರ ಚೀಟಿಯೂ ಸ್ಮಾರ್ಟ್‌ಫೋನ್‌ನಲ್ಲಿ ಸಂಗ್ರಹಿಸಬಹುದಾದ ಎಲೆಕ್ಟ್ರಾನಿಕ್ ದಾಖಲೆ ಆಗಿ ರೂಪಾಂತರಗೊಂಡಿದೆ. ಇದರಿಂದ ಹಳೆಯ ಕಾಗದ ಅಥವಾ ಪ್ಲಾಸ್ಟಿಕ್ ಕಾರ್ಡ್ ಅವಶ್ಯಕತೆ ಇಲ್ಲದಂತಾಗಿದೆ.
ಡಿಜಿಟಲ್ ರೇಷನ್ ಕಾರ್ಡ್ ಎಂದರೆ ಏನು?
ಇದು ಮೊಬೈಲ್‌ನಲ್ಲಿ ಲಭ್ಯವಾಗುವ ಆಧುನಿಕ ಪಡಿತರ ಚೀಟಿ. ಇದರಲ್ಲಿ QR ಕೋಡ್ ಮತ್ತು ಬಾರ್‌ಕೋಡ್ ಹೊಂದಿದ್ದು, ನಕಲಿ ಕಾರ್ಡ್ ತಯಾರಿಕೆಯನ್ನು ತಡೆಯುತ್ತದೆ. ಜೊತೆಗೆ “ಒಂದು ರಾಷ್ಟ್ರ – ಒಂದು ಪಡಿತರ ಚೀಟಿ (ONORC)” ಯೋಜನೆಯಡಿ ದೇಶದ ಯಾವುದೇ ಭಾಗದಲ್ಲೂ ಪಡಿತರ ಪಡೆಯಲು ಸಹಾಯವಾಗುತ್ತದೆ.
ಸಾಮಾನ್ಯ ಮತ್ತು ಡಿಜಿಟಲ್ ಕಾರ್ಡ್ ನಡುವಿನ ವ್ಯತ್ಯಾಸ
- ಸಾಮಾನ್ಯ ಕಾರ್ಡ್: ಕಾಗದ/ಪ್ಲಾಸ್ಟಿಕ್ ಆಧಾರಿತ, ಸುಲಭವಾಗಿ ಕಳೆದುಹೋಗುವ ಅಥವಾ ಹಾಳಾಗುವ ಸಾಧ್ಯತೆ. ಪಾರದರ್ಶಕತೆ ಕಡಿಮೆ.
- ಡಿಜಿಟಲ್ ಕಾರ್ಡ್: ಮೊಬೈಲ್‌ನಲ್ಲಿ ಸುರಕ್ಷಿತವಾಗಿ ಲಭ್ಯ. QR ಕೋಡ್ ಮೂಲಕ ನಿಖರ ಮಾಹಿತಿ. ದೇಶದ ಎಲ್ಲೆಡೆ ಬಳಕೆ ಸಾಧ್ಯ.
ಡಿಜಿಟಲ್ ಕಾರ್ಡ್‌ನ ಪ್ರಮುಖ ಪ್ರಯೋಜನಗಳು
- ಸುರಕ್ಷತೆ – ಕಳೆದುಹೋಗುವ ಭಯವಿಲ್ಲ. ತಕ್ಷಣ ತೋರಿಸಬಹುದು.
- ಪಾರದರ್ಶಕತೆ – ಪಡಿತರ ವಿತರಣೆ ಭ್ರಷ್ಟಾಚಾರ ಕಡಿಮೆಯಾಗುತ್ತದೆ. ಪಡೆದ ವಸ್ತುಗಳ ದಾಖಲೆ ನಿಖರ.
- ನಕಲಿ ಕಾರ್ಡ್ ತಡೆ – QR ಕೋಡ್‌ನಿಂದ ನಕಲಿ ದಾಖಲೆ ಅಸಾಧ್ಯ.
- ವಲಸೆ ಕಾರ್ಮಿಕರಿಗೆ ಅನುಕೂಲ – ದೇಶದ ಎಲ್ಲೆಡೆ ಪಡಿತರ ಪಡೆಯಲು ಸಾಧ್ಯ.
- ಗುರುತಿನ ಪುರಾವೆ – ಸರ್ಕಾರದ ಅನೇಕ ಯೋಜನೆಗಳಿಗೆ ಮಾನ್ಯ ದಾಖಲೆ.
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿದಾರರು ಮೊದಲಿಗೆ ತಮ್ಮ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
- “Apply for New Ration Card” ಆಯ್ಕೆಯನ್ನು ಆರಿಸಿ.
- ವೈಯಕ್ತಿಕ ಹಾಗೂ ಕುಟುಂಬದ ವಿವರಗಳನ್ನು ನಮೂದಿಸಿ.
- ಆಧಾರ್, ವೋಟರ್ ಐಡಿ, ವಿಳಾಸದ ಪುರಾವೆ, ಆದಾಯ ಪ್ರಮಾಣಪತ್ರ, ಕುಟುಂಬದ ಫೋಟೋ ಅಪ್ಲೋಡ್ ಮಾಡಿ.
- ಅರ್ಜಿಯ ಸ್ಥಿತಿಯನ್ನು ನೋಂದಣಿ ಸಂಖ್ಯೆಯಿಂದ ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡಬಹುದು.
- ಕೆಲವು ರಾಜ್ಯಗಳಲ್ಲಿ ಡಿಜಿಟಲ್ ರೇಷನ್ ಕಾರ್ಡ್‌ಗಾಗಿ Common Service Centre (CSC) ಮುಖಾಂತರವೂ ಅರ್ಜಿ ಸಲ್ಲಿಸುವ ಸೌಲಭ್ಯ ಲಭ್ಯವಿದೆ.
ಡೌನ್‌ಲೋಡ್ ಮಾಡುವ ವಿಧಾನ
- ರಾಜ್ಯದ ಅಧಿಕೃತ ಪೋರ್ಟಲ್ –
“Download e-Ration Card” ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ, ಕಾರ್ಡ್ ಸಂಖ್ಯೆ ಅಥವಾ ಆಧಾರ್ ಸಂಖ್ಯೆ ನಮೂದಿಸಿ. ಬಳಿಕ ಬಂದ OTP ದೃಢೀಕರಿಸಿದ ಮೇಲೆ, ಡಿಜಿಟಲ್ ರೇಷನ್ ಕಾರ್ಡ್ ಅನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದು. - ಮೇರಾ ರೇಷನ್ ಆಪ್ (Mera Ration App) – ಕೇಂದ್ರ ಸರ್ಕಾರದ ಅಧಿಕೃತ ಆಪ್, ಕಾರ್ಡ್ ಸಂಖ್ಯೆಯಿಂದ ಡಿಜಿಟಲ್ ಪ್ರತಿಯನ್ನು ಪಡೆಯಬಹುದು.
- ಡಿಜಿಲಾಕರ್ ಹಾಗೂ ರಾಷ್ಟ್ರೀಯ ಪೋರ್ಟಲ್ ಆಫ್ ಇಂಡಿಯಾ – ಅರ್ಜಿ, ಸ್ಥಿತಿ ಮತ್ತು ಡೌನ್‌ಲೋಡ್ ಸೌಲಭ್ಯ.
ಒಂದು ರಾಷ್ಟ್ರ – ಒಂದು ಪಡಿತರ ಚೀಟಿ ಯೋಜನೆ
ONORC ಯೋಜನೆಯಡಿ ಡಿಜಿಟಲ್ ರೇಷನ್ ಕಾರ್ಡ್ ಎಲ್ಲ ರಾಜ್ಯಗಳಲ್ಲಿ ಮಾನ್ಯ. ನ್ಯಾಯಬೆಲೆ ಅಂಗಡಿಯಲ್ಲಿ ಕಾರ್ಡ್‌ಧಾರಕರು ಸುಲಭವಾಗಿ ಪಡಿತರ ಪಡೆಯಬಹುದು. ವಿಶೇಷವಾಗಿ ವಲಸೆ ಕಾರ್ಮಿಕರಿಗೆ ಇದು ದೊಡ್ಡ ನೆರವು.
ಡಿಜಿಟಲ್ ರೇಷನ್ ಕಾರ್ಡ್ ಪಡಿತರ ವ್ಯವಸ್ಥೆಗೆ ತಂತ್ರಜ್ಞಾನವನ್ನು ಪರಿಚಯಿಸುವ ನವೀನ ಹೆಜ್ಜೆ. ಇದು ಕೇವಲ ಪಡಿತರ ಪಡೆಯುವುದಕ್ಕೆ ಮಾತ್ರವಲ್ಲ, ಪಾರದರ್ಶಕತೆ, ಸುರಕ್ಷತೆ ಹಾಗೂ ಸುಲಭ ಲಭ್ಯತೆಗಾಗಿ ಮಹತ್ವದ ಬದಲಾವಣೆಯಾಗಿದೆ. ಮುಂಬರುವ ದಿನಗಳಲ್ಲಿ ಪಡಿತರ ವ್ಯವಸ್ಥೆಯ ಸಂಪೂರ್ಣ ಡಿಜಿಟಲೀಕರಣಕ್ಕೆ ಇದು ಪ್ರಮುಖ ಅಡಿಗಲ್ಲಾಗಲಿದೆ.