ರಾಜ್ಯದಲ್ಲಿ ಹೊಸ ಪಡಿತರ ಚೀಟಿ ಅರ್ಜಿ ಪ್ರಕ್ರಿಯೆ ಪುನರಾರಂಭ
ಪಡಿತರ ಚೀಟಿ ಪ್ರತಿಯೊಬ್ಬ ಕುಟುಂಬಕ್ಕೂ ಅತ್ಯಂತ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಇದು ಕೇವಲ ಪಡಿತರ ವಸ್ತುಗಳನ್ನು ಪಡೆಯಲು ಮಾತ್ರವಲ್ಲದೆ, ಅನೇಕ ಸರ್ಕಾರಿ ಸೌಲಭ್ಯಗಳು ಹಾಗೂ ಕಲ್ಯಾಣ ಯೋಜನೆಗಳನ್ನು ಪಡೆಯಲು ಸಹ ಬಳಸಲಾಗುತ್ತದೆ. ಹೀಗಾಗಿ ಪಡಿತರ ಚೀಟಿಗೆ ಸಂಬಂಧಿಸಿದಂತೆ ಆಗಾಗ ಸರ್ಕಾರದಿಂದ ಹೊಸ ಮಾಹಿತಿಗಳು ಹೊರಬರುತ್ತಿರುತ್ತವೆ. ಇತ್ತೀಚೆಗೆ ರಾಜ್ಯದಲ್ಲಿ ನಕಲಿ ದಾಖಲೆಗಳನ್ನು ಆಧರಿಸಿ ಪಡೆದಿರುವ ಕೆಲವು ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸುವುದು ಹಾಗೂ ಶ್ರೀಮಂತರ ಕೈಯಲ್ಲಿರುವ ಅನರ್ಹ ಪಡಿತರ ಚೀಟುಗಳನ್ನು ರದ್ದುಗೊಳಿಸುವ ಕಾರ್ಯ ಮುಂದುವರೆದಿದೆ. ಈ ನಡುವೆ ಅರ್ಹ ಕುಟುಂಬಗಳಿಗೆ ಹೊಸ ಪಡಿತರ ಚೀಟು ನೀಡಲು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮತ್ತೆ ಆರಂಭಗೊಂಡಿದೆ.
ಅರ್ಜಿಗೆ ಅವಕಾಶ
ಬಿಪಿಎಲ್ (Below Poverty Line), ಎಪಿಎಲ್ (Above Poverty Line) ಸೇರಿದಂತೆ ಎಲ್ಲಾ ರೀತಿಯ ಪಡಿತರ ಚೀಟಿಧಾರರಿಗೆ ರಾಜ್ಯ ಸರ್ಕಾರವು ಮತ್ತೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಿದೆ. ಅರ್ಹರು ಸೆಪ್ಟೆಂಬರ್ 6 ರಂದು ಮಧ್ಯಾಹ್ನ 12 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕಿದ್ದು, ಇದಕ್ಕಾಗಿ ahara.kar.nic.in ವೆಬ್‌ಸೈಟ್, ಸೇವಾಸಿಂಧು ಪೋರ್ಟಲ್ ಅಥವಾ ಮೊಬೈಲ್ ಮತ್ತು ಕಂಪ್ಯೂಟರ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಹತೆ
ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಕೆಲವೊಂದು ನಿಬಂಧನೆಗಳನ್ನು ಸರ್ಕಾರ ಘೋಷಿಸಿದೆ:
- ಅರ್ಜಿ ಸಲ್ಲಿಸುವವರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
- ಈಗಾಗಲೇ ಪಡಿತರ ಚೀಟಿ ಹೊಂದಿರದವರು ಮಾತ್ರ ಹೊಸ ಅರ್ಜಿ ಸಲ್ಲಿಸಬಹುದು.
- ಹೊಸದಾಗಿ ವಿವಾಹವಾದ ದಂಪತಿಗಳು ಕೂಡ ಹೊಸ ಪಡಿತರ ಚೀಟಿಗೆ ಅರ್ಜಿ ಹಾಕಬಹುದು.
- ಕುಟುಂಬದ ವಾರ್ಷಿಕ ಆದಾಯದ ಆಧಾರದ ಮೇಲೆ ಅವರಿಗೆ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ನೀಡಲಾಗುತ್ತದೆ.
ಅಗತ್ಯ ದಾಖಲೆಗಳು
ಅರ್ಜಿ ಸಲ್ಲಿಸುವವರು ಕೆಳಗಿನ ದಾಖಲೆಗಳನ್ನು ಸಿದ್ಧವಾಗಿರಿಸಬೇಕು:
- ಮತದಾರರ ಗುರುತಿನ ಚೀಟಿ (Voter ID)
- ಆಧಾರ್ ಕಾರ್ಡ್
- ವಯಸ್ಸಿನ ಪ್ರಮಾಣ ಪತ್ರ
- ವಾಹನ ಚಾಲನಾ ಪರವಾನಗಿ
- ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋ
- ಮೊಬೈಲ್ ಸಂಖ್ಯೆ
- ಸ್ವಯಂ ಘೋಷಿತ ಪ್ರಮಾಣ ಪತ್ರ
ಈ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅರ್ಜಿಯೊಂದಿಗೆ ಆನ್‌ಲೈನ್‌ನಲ್ಲಿ ಅಪ್ಲೋಡ್ ಮಾಡುವುದು ಅಗತ್ಯ.
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿದಾರರು ahara.kar.nic.in ವೆಬ್‌ಸೈಟ್‌ಗೆ ಭೇಟಿ ನೀಡಬೇಕು
- “ಇ-ಸೇವೆಗಳು” ವಿಭಾಗವನ್ನು ಆಯ್ಕೆ ಮಾಡಬೇಕು
- “ಇ-ಪಡಿತರ ಚೀಟಿ” ಕ್ಲಿಕ್ ಮಾಡಬೇಕು
- ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಲಿಂಕ್ ತೆರೆಯಬೇಕು
- ಭಾಷೆಯನ್ನು ಆಯ್ಕೆ ಮಾಡಬೇಕು
- ಅಗತ್ಯ ಮಾಹಿತಿಯನ್ನು ಸರಿಯಾಗಿ ನಮೂದಿಸಬೇಕು
- ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುತ್ತಿರುವುದನ್ನು ಸೂಚಿಸಬೇಕು
- ಬೇಕಾದ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪ್ಲೋಡ್ ಮಾಡಬೇಕು
- ಈ ಹಂತಗಳ ಬಳಿಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ
ಸರ್ಕಾರದ ಕ್ರಮ
ರಾಜ್ಯದಲ್ಲಿ ಹಲವಾರು ಅನರ್ಹ ಕುಟುಂಬಗಳು ನಕಲಿ ದಾಖಲೆಗಳನ್ನು ನೀಡಿ ಬಿಪಿಎಲ್ ಪಡಿತರ ಚೀಟು ಪಡೆದಿರುವುದು ಪತ್ತೆಯಾಗಿತ್ತು. ಇಂತಹ ಚೀಟುಗಳನ್ನು ರದ್ದುಪಡಿಸುವುದರ ಜೊತೆಗೆ ಶ್ರೀಮಂತರು ಪಡೆದಿರುವ ಪಡಿತರ ಕಾರ್ಡ್‌ಗಳನ್ನೂ ವಾಪಸ್ ಪಡೆಯುವ ಕ್ರಮ ಸರ್ಕಾರ ಕೈಗೊಂಡಿದೆ. ಇದರ ಜೊತೆಗೆ ನಿಜವಾದ ಅರ್ಹ ಕುಟುಂಬಗಳಿಗೆ ಅವಕಾಶ ಕಲ್ಪಿಸಲು ಹೊಸ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.
ಪಡಿತರ ಚೀಟಿ ಕೇವಲ ಅಗ್ಗದ ದರದಲ್ಲಿ ಆಹಾರ ಧಾನ್ಯಗಳನ್ನು ಪಡೆಯಲು ಮಾತ್ರವಲ್ಲದೆ, ಅನೇಕ ಕಲ್ಯಾಣ ಯೋಜನೆಗಳು, ವಿದ್ಯಾರ್ಥಿವೇತನ, ಗೃಹ ನಿರ್ಮಾಣ ಹಾಗೂ ಸಬ್ಸಿಡಿ ಪಡೆಯಲು ಸಹ ಅಗತ್ಯವಾಗುತ್ತದೆ. ಹೀಗಾಗಿ ಅರ್ಹರು ತಮ್ಮ ಅರ್ಜಿಯನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸಬೇಕು. ತಪ್ಪು ಮಾಹಿತಿ ಅಥವಾ ನಕಲಿ ದಾಖಲೆಗಳನ್ನು ಬಳಸಿದರೆ ಚೀಟಿ ರದ್ದುಪಡಿಸುವುದರ ಜೊತೆಗೆ ಕಾನೂನು ಕ್ರಮವೂ ಕೈಗೊಳ್ಳಲಾಗುತ್ತದೆ.
ಹೀಗಾಗಿ ಅರ್ಹ ಫಲಾನುಭವಿಗಳು ಈ ಅವಕಾಶವನ್ನು ಕಳೆದುಕೊಳ್ಳದೆ ತಕ್ಷಣವೇ ಅರ್ಜಿ ಸಲ್ಲಿಸುವುದು ಸೂಕ್ತ.