November 2, 2025

ಮೊಬೈಲಿನಲ್ಲಿ ಸ್ಪಿಂಕ್ಲರ್ ಅರ್ಜಿ ಸಲ್ಲಿಸುವುದು ಹೇಗೆ – ಸರಳವಾಗಿ ತಿಳಿಯಿರಿ!

ಬೆಂಗಳೂರು, ಸೆಪ್ಟೆಂಬರ್ 2025: ರೈತರಿಗಾಗಿ ಸರ್ಕಾರ ಉತ್ತಮ ಸುದ್ದಿ ನೀಡಿದೆ. ಕೃಷಿಗೆ ಅಗತ್ಯವಿರುವ ನೀರು ನಿರ್ವಹಣೆಯನ್ನು ಸುಲಭಗೊಳಿಸಲು ಹಾಗೂ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಸರ್ಕಾರವು ಸ್ಪಿಂಕ್ಲರ್, ಡ್ರಿಪ್ ನೀರಾವರಿ ಸಾಧನಗಳಿಗೆ ಅರ್ಜಿ ಆಹ್ವಾನಿಸಿದೆ. ವಿಶೇಷವಾಗಿ ಕಡಿಮೆ ನೀರಿನಲ್ಲಿ ಹೆಚ್ಚು ಬೆಳೆ ಬೆಳೆಸಲು ಇದು ದೊಡ್ಡ ನೆರವಾಗಲಿದೆ.

ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ಹಲವಾರು ರೈತರು ಕೃಷಿ ಹೊಂಡ ನಿರ್ಮಿಸಿಕೊಂಡು ಕಡಲೆ, ಜೋಳ, ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಅವರಿಗೆ ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ನೀಡಲು ಸರ್ಕಾರವು ಶೇ.90ರಷ್ಟು ಸಹಾಯಧನದೊಂದಿಗೆ ಪೈಪ್ ಸೆಟ್‌ಗಳನ್ನು ನೀಡುತ್ತಿದೆ. ಉದಾಹರಣೆಗೆ –
• 2 ಇಂಚಿನ ಸ್ಪಿಂಕ್ಲರ್‌ಗೆ ರೈತರು ₹1,932 ಪಾವತಿಸಬೇಕು.
• 2.5 ಇಂಚಿನ ಪೈಪ್‌ಗೆ ₹2,070 ಪಾವತಿಸಬೇಕಾಗಿದೆ.

ಈ ಯೋಜನೆಯಡಿಯಲ್ಲಿ ಡ್ರಿಪ್ ಅಥವಾ ಸ್ಪಿಂಕ್ಲರ್ ನೀರಾವರಿ ಸಾಧನಗಳನ್ನು ಪಡೆಯಲು ರೈತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು ಹೀಗಿವೆ:

WhatsApp Group Join Now
Telegram Group Join Now

ಅಗತ್ಯ ದಾಖಲೆಗಳು:

ಅರ್ಜಿ ನಮೂನೆ
ಭಾವಚಿತ್ರ ಎರಡು ಪ್ರತಿಗಳು
ಉತಾರ ಮತ್ತು ಖಾತೆ ಉತಾರ
ಆಧಾರ ಕಾರ್ಡ್
ಬ್ಯಾಂಕ್ ಪಾಸ್‌ಬುಕ್
20 ರೂ. ಬಾಂಡ್ – ರೈತರ ಹೆಸರಿನಲ್ಲಿ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಸಹಿಯೊಂದಿಗೆ
ನೀರು ಮತ್ತು ಬೆಳೆ ಪ್ರಮಾಣಪತ್ರ
ಪಂಚಾಯತ್ ಠರಾವು
ಪರಿಶಿಷ್ಟ ಜಾತಿ/ಪಂಗಡ ರೈತರಿಗೆ ಜಾತಿ ಪ್ರಮಾಣಪತ್ರ
ಟ್ರಾಕ್ಟರ್ ಚಾಲಿತ ಉಪಕರಣಗಳಿಗೆ ಆರ್.ಸಿ. ಬುಕ್
ತೋಟಗಾರಿಕೆ ಇಲಾಖೆಯಿಂದ ನಿರಕ್ಷೇಪಣಾ ಪ್ರಮಾಣಪತ್ರ (NOC)
ಅರ್ಜಿಯನ್ನು ಹೇಗೆ ಸಲ್ಲಿಸಬೇಕು?

ಮೊದಲು https://kkisan.karnataka.gov.in/Citizen/ApplicationEntryMI.aspx ಲಿಂಕ್‌ಗೆ ಭೇಟಿ ನೀಡಿ.
ನಿಮ್ಮ ಮೊಬೈಲ್ ಸಂಖ್ಯೆಗೆ ಬಂದಿರುವ OTP ಅನ್ನು ನಮೂದಿಸಿ.
ಫೈನಾನ್ಶಿಯಲ್ ಇಯರ್‌ನಲ್ಲಿ “2023-24” ಆಯ್ಕೆ ಮಾಡಿ.
ನಂತರ ಹನಿ ನೀರಾವರಿ/ಸ್ಪಿಂಕ್ಲರ್ ಅಥವಾ ಡ್ರಿಪ್ ಇರಿಗೇಷನ್ ಆಯ್ಕೆಯನ್ನು ಆರಿಸಿ.
ನಿಮ್ಮ ಹೊಲದಲ್ಲಿರುವ ಬೆಳೆಗಳನ್ನು ಆಯ್ಕೆ ಮಾಡಿ, ಅದರ ಪ್ರಕಾರ ನೀರಿನ ಮೂಲವನ್ನು ನಮೂದಿಸಿ.
ಲಭ್ಯವಿರುವ ಕಂಪನಿಯಿಂದ ಸ್ಪಿಂಕ್ಲರ್ ತಯಾರಕರನ್ನು ಆಯ್ಕೆ ಮಾಡಿ ಸಮ್ಮಿಟ್ ಮಾಡಿ.
ಅಕ್ನಾಲೆಡ್ಜ್‌ಮೆಂಟ್ ಪ್ರತಿಯನ್ನು ಡೌನ್‌ಲೋಡ್ ಮಾಡಿ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಸಲ್ಲಿಸಿ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ರೈತ ಸಂಪರ್ಕ ಕೇಂದ್ರ ಅರಭಾವಿಯ ಸಹಾಯವಿದೆ. ರೈತರು ಕೂಡಲೇ ಭೇಟಿ ನೀಡಿ ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆದುಕೊಳ್ಳಬಹುದು. ಗುಣಮಟ್ಟದ ನೀರು ನಿರ್ವಹಣೆಗೆ ಇದು ಹೊಸ ಹೆಜ್ಜೆಯಾಗಿದ್ದು, ಬೆಳೆ ಉತ್ಪಾದನೆಗೆ ದೊಡ್ಡ ನೆರವಾಗಲಿದೆ.

ಸರ್ಕಾರದ ಈ ಯೋಜನೆಯ ಮೂಲಕ ರೈತರ ಆದಾಯ ಹೆಚ್ಚಿಸಲು ಮತ್ತು ನೀರನ್ನು ಪರಿಣಾಮಕಾರಿಯಾಗಿ ಬಳಸಲು ಉತ್ತಮ ಅವಕಾಶ ಲಭ್ಯವಾಗಿದೆ. ಕೂಡಲೇ ಅರ್ಜಿ ಸಲ್ಲಿಸಿ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *