ಬಜೆಟ್‌ಗೂ ಮುನ್ನ ಭಾರೀ ಕುಸಿತ ಕಂಡ ಚಿನ್ನದ ದರ – ಇಂದಿನ ಸಂಪೂರ್ಣ ವಿವರ ಇಲ್ಲಿದೆ
ಚಿನ್ನದ ದರದಲ್ಲಿ ಗ್ರಾಹಕರಿಗೆ ಲಾಭದ ದಿನ!
ಇಂದು ಫೆಬ್ರವರಿ 1, ಭಾನುವಾರ. ನಿನ್ನೆ ಶನಿವಾರ ಭಾರೀ ಕುಸಿತ ಕಂಡಿದ್ದ ಚಿನ್ನದ ಬೆಲೆ, ಇಂದೂ ಕೂಡ ಗ್ರಾಹಕರ ಕೈಗೆಟುಕುವ ಮಟ್ಟದಲ್ಲೇ ಮುಂದುವರಿದಿದೆ. ಮದುವೆ ಸೀಸನ್ ಆರಂಭವಾಗಿರುವ ಈ ಸಮಯದಲ್ಲಿ, ಚಿನ್ನ ಖರೀದಿಗೆ ಇದೊಂದು ‘ಗೋಲ್ಡನ್ ಚಾನ್ಸ್’ ಎನ್ನಬಹುದು. ಬೆಳ್ಳಿ ಬೆಲೆಯಲ್ಲಿಯೂ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ.
ಬೆಂಗಳೂರು:
ಫೆಬ್ರವರಿ ತಿಂಗಳ ಮೊದಲ ದಿನವೇ ಆಭರಣ ಪ್ರಿಯರಿಗೆ ಸಂತಸದ ಸುದ್ದಿ ಸಿಕ್ಕಿದೆ. ಸಾಮಾನ್ಯವಾಗಿ ತಿಂಗಳ ಆರಂಭ ಮತ್ತು ಕೇಂದ್ರ ಬಜೆಟ್ ಅವಧಿಯಲ್ಲಿ ಚಿನ್ನದ ದರದಲ್ಲಿ ಏರಿಳಿತ ಸಾಮಾನ್ಯ. ಆದರೆ, ನಿನ್ನೆ ಒಂದೇ ದಿನಕ್ಕೆ 22 ಕ್ಯಾರಟ್ ಚಿನ್ನದ ದರದಲ್ಲಿ 900 ರೂ.ಗೂ ಹೆಚ್ಚು ಇಳಿಕೆ ಕಂಡುಬಂದಿತ್ತು.
ಇಂದು ಭಾನುವಾರ ಮಾರುಕಟ್ಟೆ ರಜೆ ಇರುವ ಕಾರಣ, ನಿನ್ನೆಯ ಇಳಿಕೆ ದರವೇ ಇಂದಿಗೂ ಅನ್ವಯವಾಗಿದ್ದು, ಗ್ರಾಹಕರು ಕಡಿಮೆ ದರದಲ್ಲಿ ಚಿನ್ನ ಖರೀದಿಸುವ ಅವಕಾಶ ಪಡೆದುಕೊಂಡಿದ್ದಾರೆ.
ಮದುವೆ ಸೀಸನ್‌ಗೆ ದೊಡ್ಡ ರಿಲೀಫ್
ರಾಜ್ಯಾದ್ಯಂತ ಮದುವೆ ಹಾಗೂ ಶುಭ ಸಮಾರಂಭಗಳು ಜೋರಾಗಿರುವ ಈ ಸಮಯದಲ್ಲಿ ಚಿನ್ನದ ಬೆಲೆ ಇಳಿಕೆಯಾಗಿರುವುದು ಪೋಷಕರಿಗೆ ದೊಡ್ಡ ನೆಮ್ಮದಿ ನೀಡಿದೆ. ಸೋಮವಾರ ಮಾರುಕಟ್ಟೆ ಆರಂಭವಾದ ಬಳಿಕ ಬೆಲೆ ಮತ್ತೆ ಏರಿಕೆ ಕಾಣುವ ಸಾಧ್ಯತೆ ಇರುವುದರಿಂದ, ಇಂದೇ ಖರೀದಿಸುವುದು ಸೂಕ್ತ ಎನ್ನಲಾಗುತ್ತಿದೆ.
ಚಿನ್ನ – ಬೆಳ್ಳಿ ಬೆಲೆ ಇಂದು (ಫೆಬ್ರವರಿ 01, 2026)
ಬೆಳಿಗ್ಗೆ 7 ಗಂಟೆಗೆ ಪರಿಶೀಲಿಸಿದ ಮಾರುಕಟ್ಟೆ ದರ
ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ
- 24 ಕ್ಯಾರಟ್ (10 ಗ್ರಾಂ) ಚಿನ್ನ: ₹1,60,580
- 22 ಕ್ಯಾರಟ್ (10 ಗ್ರಾಂ) ಚಿನ್ನ: ₹1,47,200
- ಬೆಳ್ಳಿ (1 ಕೆಜಿ): ₹2,57,900
ಕರ್ನಾಟಕದಲ್ಲಿ ಇಂದಿನ ಚಿನ್ನದ ದರ (1 ಗ್ರಾಂ)
- 18 ಕ್ಯಾರಟ್ ಆಭರಣ ಚಿನ್ನ: ₹12,044
- 22 ಕ್ಯಾರಟ್ ಆಭರಣ ಚಿನ್ನ: ₹14,720
- 24 ಕ್ಯಾರಟ್ ಅಪರಂಜಿ ಚಿನ್ನ: ₹16,058
8 ಗ್ರಾಂ ಚಿನ್ನದ ಬೆಲೆ
- 18 ಕ್ಯಾರಟ್: ₹96,352
- 22 ಕ್ಯಾರಟ್: ₹1,17,760
- 24 ಕ್ಯಾರಟ್: ₹1,28,464
10 ಗ್ರಾಂ ಚಿನ್ನದ ಬೆಲೆ
- 18 ಕ್ಯಾರಟ್: ₹1,20,440
- 22 ಕ್ಯಾರಟ್: ₹1,47,200
- 24 ಕ್ಯಾರಟ್: ₹1,60,580
100 ಗ್ರಾಂ ಚಿನ್ನದ ಬೆಲೆ
- 18 ಕ್ಯಾರಟ್: ₹12,04,400
- 22 ಕ್ಯಾರಟ್: ₹14,72,000
- 24 ಕ್ಯಾರಟ್: ₹16,05,800
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ (1 ಗ್ರಾಂ)
- ಚೆನ್ನೈ – ₹15,611
- ಮುಂಬೈ – ₹15,316
- ದೆಹಲಿ – ₹15,316
- ಕೋಲ್ಕತ್ತಾ – ₹15,316
- ಬೆಂಗಳೂರು – ₹15,316
- ಹೈದರಾಬಾದ್ – ₹15,316
- ಕೇರಳ – ₹15,316
- ಪುಣೆ – ₹15,316
- ವಡೋದರಾ – ₹15,321
- ಅಹಮದಾಬಾದ್ – ₹15,321
ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)
- ಚೆನ್ನೈ – ₹25,590
- ಮುಂಬೈ – ₹23,790
- ದೆಹಲಿ – ₹23,790
- ಕೋಲ್ಕತ್ತಾ – ₹23,790
- ಬೆಂಗಳೂರು – ₹23,790
- ಹೈದರಾಬಾದ್ – ₹25,590
- ಕೇರಳ – ₹25,590
- ಪುಣೆ – ₹23,790
- ವಡೋದರಾ – ₹23,790
- ಅಹಮದಾಬಾದ್ – ₹23,790
ನೀವು ಮದುವೆ ಅಥವಾ ಶುಭ ಸಮಾರಂಭಗಳಿಗಾಗಿ ಚಿನ್ನದ ಆಭರಣ ಖರೀದಿಸಲು ಯೋಜನೆ ಮಾಡಿಕೊಂಡಿದ್ದರೆ, ಇಂದೇ ಜ್ಯುವೆಲ್ಲರಿ ಅಂಗಡಿಗೆ ಭೇಟಿ ನೀಡುವುದು ಒಳಿತು. ಸೋಮವಾರ ವಹಿವಾಟು ಆರಂಭವಾದ ಬಳಿಕ ಚಿನ್ನದ ದರ ಮತ್ತೆ ಏರಿಕೆಯಾಗುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಹಳೆಯ ಚಿನ್ನವನ್ನು ಎಕ್ಸ್ಚೇಂಜ್ ಮಾಡಿಕೊಳ್ಳಲು ಕೂಡ ಇದು ಉತ್ತಮ ಸಮಯ.