ಅಡಿಕೆ ದರ ಏರಿಕೆ: ಸೆಪ್ಟೆಂಬರ್ 10ರ ದಾವಣಗೆರೆ ಮಾರುಕಟ್ಟೆ ದರ

ಅಡಿಕೆ ದರ ಏರಿಕೆ: ಸೆಪ್ಟೆಂಬರ್ 10ರ ದಾವಣಗೆರೆ ಮಾರುಕಟ್ಟೆ ದರ

ದಾವಣಗೆರೆ: ರಾಜ್ಯದಲ್ಲಿ ಇತ್ತೀಚೆಗೆ ಇಳಿಕೆಯಾಗುತ್ತಿದ್ದ ಅಡಿಕೆ ದರ ಇದೀಗ ಮತ್ತೆ ಏರಿಕೆಯತ್ತ ಹೊರಟಿದೆ. ವಿಶೇಷವಾಗಿ ದಾವಣಗೆರೆ, ಚನ್ನಗಿರಿ, ಹೊನ್ನಾಳಿ ಭಾಗಗಳಲ್ಲಿ ಅಡಿಕೆ ಮುಖ್ಯ ಬೆಳೆ ಆಗಿದ್ದು, ಹೆಚ್ಚಿನ ರೈತರು ಶಿವಮೊಗ್ಗ ಮಾರುಕಟ್ಟೆಗೆ ಅಡಿಕೆಯನ್ನು ಸಾಗಿಸುತ್ತಾರೆ.

ದಾವಣಗೆರೆ ಅಡಿಕೆ ದರ – ಸೆಪ್ಟೆಂಬರ್ 10

ಸೆಪ್ಟೆಂಬರ್ 10ರಂದು ದಾವಣಗೆರೆ ಜಿಲ್ಲೆಯ ಮಾರುಕಟ್ಟೆಯಲ್ಲಿ ಅಡಿಕೆ ದರ ಏರಿಕೆಯತ್ತ ಸಾಗಿದ್ದು, ಕ್ವಿಂಟಾಲ್‌ಗೆ ಗರಿಷ್ಠ ₹59,669, ಕನಿಷ್ಠ ₹52,149 ಹಾಗೂ ಸರಾಸರಿ ₹55,454 ದಾಖಲಾಗಿದೆ. ಕಳೆದ ಕೆಲ ದಿನಗಳಿಂದ ದರದಲ್ಲಿ ಏರಿಳಿತ ಕಂಡುಬಂದಿದ್ದರೂ, ಇಂದು ಮತ್ತೆ ಏರಿಕೆ ಕಂಡಿದೆ.

2025ರ ಜನವರಿಯಲ್ಲಿ ಕ್ವಿಂಟಾಲ್ ಅಡಿಕೆ ದರ ₹52,000 ಒಳಗಡೆ ಇತ್ತೆ. ನಂತರ ಫೆಬ್ರವರಿಯಲ್ಲಿ ಅದು ₹53,000 ಗಡಿ ದಾಟಿತು. ಏಪ್ರಿಲ್ ವೇಳೆಗೆ ದರವು ₹60,000 ತಲುಪಿತ್ತು. ಆದರೆ ಮೇ-ಜೂನ್ ತಿಂಗಳಲ್ಲಿ ಮತ್ತೆ ಇಳಿಕೆಯಾಗಿದ್ದು, ಆಗಸ್ಟ್‌ನಲ್ಲಿ ತುಸು ಸುಧಾರಣೆ ಕಂಡಿತ್ತು. ಇದೀಗ ಸೆಪ್ಟೆಂಬರ್ ಎರಡನೇ ವಾರದಲ್ಲಿ ಮತ್ತೆ ದರ ಏರಿಕೆಯಾಗಿದೆ.

ಈ ಬಾರಿ ಮುಂಗಾರು ಬೇಗ ಪ್ರಾರಂಭವಾದುದರಿಂದ ಉತ್ತಮ ಫಸಲಿನ ನಿರೀಕ್ಷೆ ಇದೆ. ರೈತರು ಮುಂದೆ ದರ ಇನ್ನಷ್ಟು ಏರಿಕೆಯಾಗಲಿದೆ ಎಂಬ ಭರವಸೆಯಲ್ಲಿ ಇದ್ದಾರೆ. ಆದರೆ ಅಡಿಕೆಯನ್ನು ಕೀಟಗಳಿಂದ ಹಾಗೂ ಹಾನಿಯಿಂದ ರಕ್ಷಿಸುವುದು ರೈತರಿಗೆ ಇನ್ನೂ ದೊಡ್ಡ ಸವಾಲಾಗಿದೆ.

Leave a Comment